Home
Welcome to the website of Town Panchayat Hukkeri
Hukkeri, in Belgaum District of Karnataka, is a place of considerable antiquity. Archeological studies indicate that the place name Hukkeri is supposed to have been derived from ‘Huvinkeri’, means Street of Flowers. Good quality roses were grown here during the Adil Shahi times and the history of the place begins from the 14th Century. Evidences show light into the fact the place existed even before and was a center of the Jain and Shaivite cult. Hukkeri is around 40 km north of Belgaum.
Prime attractions at Hukkeri are the Fort and the largest tomb of Hukkeri constructed by Ain-ul-Mulk Jilani in 1509. There are also old temples of Someshwar, three Jain Bastis built in 17th Century, and the Kadam Rasul Mosque. The place also has Durgas ascribed to a lady Mansahib with inscription 1568, Hamidu’d-Din near Gajaabarwadi, Ganjul Bahar Mosque, Alum Bukhari, and Ayesha Sultana daughter of Firoz Shah Bahamani.
ಹುಕ್ಕೇರಿ ಈ ಪಟ್ಟಣ ಪಂಚಾಯತಿಯು ಸನ್ 1973 ರಲ್ಲಿ ಸ್ಥಾಪನೆವಾಗಿರುತ್ತದೆ. ಇದು ಜಿಲ್ಲಾ ಕೇಂದ್ರ ಬೆಳಗಾವಿಯಿಂದ 48 ಕಿ.ಮೀ.ಅಂತರ ಇರುತ್ತದೆ.ಈ ಪಟ್ಟಣಕ್ಕೆ ಘಟಪ್ರಭಾ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ (ಹಿಡಕಲ್ ಡ್ಯಾಂ) .ಈ ಪಟ್ಟಣದ ಜನಸಂಖ್ಯೆಯು 2001 ರ ಜನಗಣತಿಯ ಪ್ರಕಾರ ಜನಸಂಖ್ಯೆ ಅಂದಾಜು 19917 ಇರುತ್ತದೆ.ಈ ಪಟ್ಟಣದಲ್ಲಿ 19 ವಾರ್ಡುಗಳಿರುತ್ತವೆ.ಈ ಪಟ್ಟಣವು ಎರಡು ಪದವಿ ಕಾಲೇಜುಗಳನ್ನು ಹೊಂದಿದೆ.ಹಾಗೂ ಮನರಂಜನೆಗಾಗಿ ಎರಡು ಚಿತ್ರಮಂದಿರಗಳು ಇವೆ. ಈ ತಾಲೂಕಿನಲ್ಲಿ ಕಬ್ಬು,ತಂಬಾಕು,ಸೋಯಾಬೀನ ಅವರೆ, ಮೆಕ್ಕೆಜೋಳಗಳನ್ನು ಬೆಳೆಯಲಾಗುತ್ತಿದೆ. ಈ ತಾಲೂಕಿನಲ್ಲಿ 3 ಸಕ್ಕರೆ ಕಾರ್ಖಾನೆಗಳು ಅಸ್ತಿತ್ವದಲ್ಲಿವೆ. ಸಕ್ಕರೆ ಜಿಲ್ಲೆ ಬೆಳಗಾವಿ ಎಂಬ ಪ್ರಸಿದ್ಧಿಗೆ ಈ ತಾಲೂಕಿನಲ್ಲಿ ಬೆಳೆಯುವ ಕಬ್ಬಿನ ಬೆಳೆ ಪಾತ್ರವು ಬಹು ಮುಖ್ಯವಾದದು. ಈ ತಾಲೂಕಿನಲ್ಲಿ ಅನೇಕ ನದಿಗಳು ಹರಿಯುತ್ತಿವೆ.(ಘಟಪ್ರಭಾ,ಹಿರಣ್ಯಕೇಶಿ,ಮಾರ್ಕಂಡೇಯ).ಈ ತಾಲೂಕಿನಲ್ಲಿ ಘಟಪ್ರಭಾ ನದಿಗೆ ಹಿಡಕಲ್ ಬಳಿ ಆಣೆಕಟ್ಟು ಕಟ್ಟಲಾಗಿದೆ.ಹಿನ್ನಲೆ : ವಿಜಾಪೂರದ ಆದಿಲಶಾಹಿ ಕಾಲದಲ್ಲಿ ಇದು ಸಂಪೂರ್ಣವಾಗಿ ಕಾಡು ಮೃಗಗಳಿಂದ ಕೂಡಿದ ಕಾಡುಪ್ರದೇಶವಾಗಿತ್ತು,ಹಾಗೂ ಜನವಸತಿ ವಿರಳವಾಗಿತ್ತು, ಮತ್ತು ನೀರಿನ ಅಭಾವವಿತ್ತು.ಆ ಸಮಯದಲ್ಲಿ ಆದಿಲಶಾಹಿಯು ಈ ಪ್ರದೇಶಕ್ಕೆ ನೀರಿನ ವೆವಸ್ಥೆಗೆ ಕಾರಂಜಿಗಳನ್ನು ನಿರ್ಮಿಸಿದನು ಇದರಲ್ಲಿ ಬಿಸಿನೀರಿನ ಕಾರಂಜಿ ಅಚ್ಚರಿಯನ್ನು ಉಂಟು ಮಾಡುತ್ತದೆ,ಮತ್ತು ಈ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಸುಂದರ ಗುಲಾಬಿ ಹೂಗಳನ್ನು ವಿಜಾಪೂರಕ್ಕೆ ಸಾಗಾಟ ಮಾಡುತ್ತಿದ್ದರು ಆದ್ದರಿಂದ ಈ ಪಟ್ಟಣಕ್ಕೆ ಹೂವಿನ ಕೇರಿ (ಹುಕ್ಕೇರಿ) ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆಯಿತು. ಈ ಪಟ್ಟಣದಲ್ಲಿ ಮಹಿಳೆಯರಿಗಾಗಿ ಪ್ರಾರ್ಥನೆಗೆ ಪ್ರತ್ಯೇಕ ಜನಾನಾ ಮಸೀದಿಯನ್ನು ಆದಿಲಶಾಹಿ ಕಾಲದಲ್ಲಿ ಕಟ್ಟಲಾಗಿದೆ.ಇಲ್ಲಿನ ಮೊಹರಂ ವಿಶಿಷ್ಟ ರೀತಿಯಲ್ಲಿ ಆಚರಣೆಯಾಗುತ್ತದೆ. ಇಲ್ಲಿ ಅನೇಕ ಮಸೀದಿಗಳನ್ನು ಹಾಗೂ ಕೋಟೆಯನ್ನು ಕಟ್ಟಲಾಗಿದೆ ಅವುಗಳನ್ನು ಈಗಲೂ ನೋಡಬಹುದು. ಈ ಪಟ್ಟಣವು ಕೋಮು ಸೌಹರ್ದತೆಗೆ ಹೆಸರುವಾಸಿಯಾಗಿದೆ. ಈ ಪಟ್ಟಣದ ಗ್ರಾಮದೇವತೆ (ಲಕ್ಷ್ಮೀ ದೇವಿ) ಜಾತ್ರೆಯು ಪ್ರತಿ ಮೂರು ವರ್ಷಕ್ಕೊಮ್ಮೆ ವೈಭವದಿಂದ ನಡೆಯುತ್ತದೆ.
ಹುಕ್ಕೇರಿ ಪ.ಪಂ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳನ್ನು ಗಣಕೀಕೃತಮಾಡುವ ಉದ್ದೇಶದಿಂದ ಸದರಿ ಆಸ್ತಿಗಳ "ಸಿ ಪಾರ್ಮ" ಪ್ರತಿಗಳನ್ನು ಪ.ಪಂ ಆಸ್ತಿ ಮಾಲಿಕರಿಗೆ ವಿತರಿಸಲಾಗುತ್ತಿದೆ.ಆಸ್ತಿ ಮಾಲೀಕರು "ಸಿ ಪಾರ್ಮ"ನಲ್ಲಿ ನಮೂದಿಸಿದ ತಮ್ಮ ಆಸ್ತಿಗಳ ಮಾಹಿತಿಯನ್ನು ಪರಿಶೀಲಿಸಿ, ಸರಿ ಇರುವ ಬಗ್ಗೆ ಹಾಗೂ ತಪ್ಪು ಮಾಹಿತಿ ಇರುವುದನ್ನು ಖಚಿತಪಡಿಸಿಕೊಂಡು ಸರಿಯಾದ ಮಾಹಿತಿಯೊಂದಿಗೆ ಮೂಲ ಪ್ರತಿಯನ್ನು ತಮಗೆ ಸಲ್ಲಿಸಿದ 15 ದಿನಗಳೊಳಗಾಗಿ ಪ.ಪಂ ತಿಳಿಸಲು ತಮಗೆ ತಿಳಿಯಪಡಿಸಲಾಗಿದೆ.
SJSRY component wise Beneficiaries list (STEP-UP and 22.75% and 7.25% and 3%)
ದಿನಾಂಕ 02-04-2012 ರಿಂದ ಹುಕ್ಕೇರಿ ಪಟ್ಟಣ ಪಂಚಾಯತಿಯಲ್ಲಿ ನಾಗರೀಕ ಸೇವೆಗಳ ಖಾತರಿ ಅಧಿನಿಯಮ 2011ನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಸದರ ಯೋಜನೆಯ ಉಪಯೋಗ ಪಡೆದುಕೊಳ್ಳಲು ಕೋರಿದೆ.
12 Hours Help Line Service - Dail 08333-266138
In the News
ವಿಶ್ವ ಬ್ಯಾಂಕ ನೆರವಿನ ಕರ್ನಾಟಕ ಪೌರಸುಧಾರಣಾ ಯೋಜನಾ ಅಡಿಯಲ್ಲಿ ರಸ್ತೆ ಸುಧಾರಣೆ ಸಲುವಾಗಿ (ಕೋರ್ಟ ಸರ್ಕಲದಿಂದ ಗ್ರಂಥಾಲಯದವರೆಗೆ) ಸದರಿ ಕಾಮಗಾರಿಯ ಚಿತ್ರಣಗಳು.
02-09-2011:- ಪಟ್ಟಣ ಪಂಚಾಯತ ಹುಕ್ಕೇರಿ 40 ಮೈಕ್ರಾನಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬ್ಯಾಗ ಹಾಗೂ ಕೈಚೀಲಗಳನ್ನು ಮಾರುವುದು ಹಾಗೂ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿರಿ
ಹುಕ್ಕೇರಿ ಪ.ಪಂ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳನ್ನು ಗಣಕೀಕೃತಮಾಡುವ ಉದ್ದೇಶದಿಂದ ಸದರಿ ಆಸ್ತಿಗಳ "ಸಿ ಪಾರ್ಮ" ಪ್ರತಿಗಳನ್ನು ಪ.ಪಂ ಆಸ್ತಿ ಮಾಲಿಕರಿಗೆ ವಿತರಿಸಲಾಗುತ್ತಿದೆ.ಆಸ್ತಿ ಮಾಲೀಕರು "ಸಿ ಪಾರ್ಮ"ನಲ್ಲಿ ನಮೂದಿಸಿದ ತಮ್ಮ ಆಸ್ತಿಗಳ ಮಾಹಿತಿಯನ್ನು ಪರಿಶೀಲಿಸಿ, ಸರಿ ಇರುವ ಬಗ್ಗೆ ಹಾಗೂ ತಪ್ಪು ಮಾಹಿತಿ ಇರುವುದನ್ನು ಖಚಿತಪಡಿಸಿಕೊಂಡು ಸರಿಯಾದ ಮಾಹಿತಿಯೊಂದಿಗೆ ಮೂಲ ಪ್ರತಿಯನ್ನು ತಮಗೆ ಸಲ್ಲಿಸಿದ 15 ದಿನಗಳೊಳಗಾಗಿ ಪ.ಪಂ ತಿಳಿಸಲು ತಮಗೆ ತಿಳಿಯಪಡಿಸಲಾಗಿದೆ.
ದಿನಾಂಕ 02-04-2012 ರಿಂದ ಹುಕ್ಕೇರಿ ಪಟ್ಟಣ ಪಂಚಾಯತಿಯಲ್ಲಿ ನಾಗರೀಕ ಸೇವೆಗಳ ಖಾತರಿ ಅಧಿನಿಯಮ 2011ನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಸದರ ಯೋಜನೆಯ ಉಪಯೋಗ ಪಡೆದುಕೊಳ್ಳಲು ಕೋರಿದೆ. In the News ವಿಶ್ವ ಬ್ಯಾಂಕ ನೆರವಿನ ಕರ್ನಾಟಕ ಪೌರಸುಧಾರಣಾ ಯೋಜನಾ ಅಡಿಯಲ್ಲಿ ರಸ್ತೆ ಸುಧಾರಣೆ ಸಲುವಾಗಿ (ಕೋರ್ಟ ಸರ್ಕಲದಿಂದ ಗ್ರಂಥಾಲಯದವರೆಗೆ) ಸದರಿ ಕಾಮಗಾರಿಯ ಚಿತ್ರಣಗಳು.
02-09-2011:- ಪಟ್ಟಣ ಪಂಚಾಯತ ಹುಕ್ಕೇರಿ 40 ಮೈಕ್ರಾನಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬ್ಯಾಗ ಹಾಗೂ ಕೈಚೀಲಗಳನ್ನು ಮಾರುವುದು ಹಾಗೂ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿರಿ

